ಆ ನೆನಪುಗಳು

ನೆನಪುಗಳೇ ಹಾಗೇ..ಹೊರಗಡೆ ಇದ್ದಾಗ ಹಾಯ್ ಅಂತೇಳಿ ಮಾತು ಪ್ರಾರಂಭ ಆಗಿ 2 ನಿಮಿಷದಲ್ಲಿ ಮತ್ತೆ ಬಾಯ್ ಅಂತ ಕಾಲ್ ಕಟ್ ಮಾಡ್ತೀವಿ.ಆದ್ರೆ ಈಗ ಅದೇ ಫ್ರೆಂಡ್ಸ್ ಎಲ್ಲಾ ಮತ್ತೆ ಸೇರಿದಿವಿ.ಹಾಗ ಹಂಗಿತ್ತು..ಇವ್ನು ಅದ್ನ ಮಾಡ್ತಿದ್ದ..ಅವ್ನು ಇನ್ನೇನೋ ಅಂತೆಲ್ಲ ಮಾತಾಡ್ತಾ ಕ್ವಾರಂಟೈನ್ ಅನ್ನೋದನ್ನ ಕಳಿತ ಇದೀವಿ.
ನಾವೆಲ್ಲ 90's ಕಿಡ್ಸ್ ಅಂತ..ನನ್ ಏಜಿನ ಪ್ರತಿಯೊಬ್ಬರಿಗೂ ಗೊತ್ತಿರುತ್ತೆ ಏನು ಅಂತ.ನಮ್ ಲೈಫ್ ಒಂಥರಾ ಜಿಂಗಲಾಲಾ.
90'ಸ್ ಲಿ ಹುತ್ತಿದ್ವಿ..ಅಂಬೆಗಾಲಿಟ್ಟು ನಡೆಯೋಕೆ ಕಲ್ತು ಸ್ವಲ್ಪ ಮಾತು ಬಂದ್ರೆ ಸಾಕು ಸೀದಾ ಸಾದ ಯಾವುದಾದ್ರು ಕಾನ್ವೆಂಟ್ ಶಾಲೆಗೆ ಹಾಕೋದೆ.ಕೆಲವೊಬ್ಬರು ಸರ್ಕಾರಿ ಶಾಲೆಲೀ ಕೂಡ ಓದಿರೋರು ಇದಾರೆ. ನಮ್ಮನ್ನ ಸೇರಿಸಿದ್ದು ಚರ್ಚ್ ಶಾಲೆ ಅಂತಾನೆ ಕರೆಯೋ ಕ್ರಿಶ್ಚಿಯನ್ ಶಾಲೆಯಲ್ಲಿ.
ಶಿಸ್ತಿನ ಶಾಲೆ..ಅದೇ ತಾನೇ ಪ್ರಾರಂಭ ಆಗಿತ್ತು..ನಮದೇ ಫಸ್ಟ್ ಬ್ಯಾಚ್ ಆ ಶಾಲೇಲಿ.
ಪ್ರತಿ ದಿನ ಬೆನ್ನಿಗೆ ಬೇತಾಳ ಬಿದ್ದಂಗೆ ಒಂದು ದೊಡ್ಡ ಬ್ಯಾಗ್, ಅದರ ತುಂಬೆಲ್ಲಾ ಪೆನ್ಸಿಲ್, ರಬ್ಬರ್ ( ಇರೆಸಾರ್), ಶಾರ್ಪ್ನರ್,ತಿನ್ನೋಕೆ ಒಂದಿಷ್ಟು ಚಾಕಲೇಟ್ ಹಾಗೆ ಒಂದೈದು ಬುಕ್ಸ್ ಆ ವಯ್ಯಸ್ಸಿಗೆ.
ಮನೆ ಕಡೆ ಬಂದ್ರೆ ಆಗಿನ್ನೂ ಕಳ್ಳ ಪೊಲೀಸ್ ಆಟ ಪ್ರಚಲಿತ.ಬೆಳೀತಾ ಬೆಳೀತಾ ಗೋಲಿ, ಲಗೋರಿ ಆಡೋಕೆ ಶುರು ಮಾಡಿದ್ವಿ.ಸಂಜೆ 5 ಗಂಟೆ ಆದ್ರೆ ಸಾಕು ಅದೊಂದು ಪುಟ್ಟ 10 ಅಡಿ ಫೀಲ್ಡ್..ಅದರಲ್ಲೇ ಕಲರ್ ಕಲರ್ ಗೋಲಿ ಆಡೋದು.ಅದಾದ್ಮೇಲೆ ಮುಖ ತೊಳ್ಕೊಂಡು ಹೋಮ್ ವರ್ಕ್ ಮಾಡೋದು.ಮತ್ತೆ ಕರೆಂಟ್ ಕಟ್ ಆದ್ರೆ ಬಚ್ಚಿಟ್ಟುಕೋ ಆಟ ಶುರು.
ಆ ಏಜ್ ಅಲ್ಲಿರುವಾಗ ಪ್ರತಿಯೊಂದು ಹೊಸ ಜಗತ್ತೇ..ಇನ್ನೊಂದು ಓಣಿ, ಏರಿಯಾ, ಬೀದಿ ಎಲ್ಲದು ಇನ್ನೊಂದು ಜಗತ್ತಾಗಿತ್ತು.
ಗೋಲಿ, ಚಿನ್ನಿ ದಾಂಡು, ಬುಗುರಿ, ಲಗೋರಿ, ಕುಂಟೆಬಿಲ್ಲೆ, ಟೈರ್ ಓಡಿಸೋದು,ಮರಳಲ್ಲಿ ಮನೆ ಕಟ್ಟೋದು, ಚೌಕಬಾರ ಆಡೋದ್ನ ಕಲಿಯೋದು, ಕೇರಮ್,ಚೆಸ್, ಹಾಗೇ ಕ್ರಿಕೆಟ್ ಕೂಡ ಶುರು ಆಯಿತು.
ಶಾಲೆಯಲ್ಲಿ ಪ್ರತಿಭಾ ಕಾರಂಜಿ, ವರ್ಷದ ಮೊದಲಿಗೆ ಮಾಡ್ತಿದ್ದ ಅಕಾಡೆಮಿಕ್ ಪ್ರೋಗ್ರಾಮ್, ಆಮೇಲೆ ಆಗಸ್ಟ್ 15, ಕ್ರಿಸ್ಮಸ್ ಹಬ್ಬ, ಜನವರಿ 26, ಸ್ಕೂಲ್ ಡೇ, ಸ್ಪೋರ್ಟ್ಸ್ ಡೇ ಅಂತ ಕಾಯ್ತಾ ಇರ್ತೀದ್ವಿ. ಆ ಯುನಿಫಾರ್ಮ್ ಹಾಕೊಂಡು ಯಾವತ್ತೂ ಸ್ಟೈಲ್ ಮಾಡ್ಲಿಲ್ಲ..ಯಾವಾಗ್ಲೂ ಕರೆಕ್ಟ್ ಆಗಿ ಹೇರ್ ಕಟ್ ಆಗಿರಬೇಕು,ಉಗುರು ತೆಗದಿರ್ಬೇಕು, ಶೂ ಪಾಲಿಶ್ ಆಗಿರಬೇಕು,ಸಾಕ್ಸ್ ಟೈಟ್ ಆಗಿರಬೇಕು.
ಇದರ ನಡುವೆ ಬರ್ತಿತ್ತು ಗಣೇಶ ಹಬ್ಬ.ಏರಿಯಾದಲ್ಲಿ ಸ್ಟೇಜ್ ಹಾಕೋ ಮೊದಲನೇ ದಿನದಿಂದ ವಿಸರ್ಜನೆ ಆಗೋವರೆಗೂ ಅದೇ ಹಾಟ್ ಸ್ಪಾಟ್..ಇಷ್ಟು ಗಣಪತಿ ದರ್ಶನ ಮಾಡಲೇಬೇಕು ಅಂತ ಫ್ರೆಂಡ್ಸ್ ಜೊತೆ ಸೇರಿಕೊಂಡು ಊರೆಲ್ಲ ತಿರುಗಾಡಿ ಆಮೇಲೆ ಮನೆಗೋದ್ಮೇಲೆ ಏನೋ ಒಂದು ಸುಳ್ಳೇಳೋದು.. ಅಲ್ಲೇ ಡ್ಯಾನ್ಸ್ ಮಾಡೋದು, ಬೇರೆ ಹುಡುಗರನ್ನ ಪರಿಚಯ ಮಾಡಿಕೊಂಡು ಟೈಮ್ ಪಾಸ್ ಮಾಡೋದು ಈಗೆ ನಡೀತಿತ್ತು.ಇಷ್ಟರ ನಡುವೆ ದಸರಾ ಹಬ್ಬ ರಜೆ ಸಿಗ್ತಿತ್ತು, ದೀಪಾವಳಿದು ಇರ್ತಿತ್ತು.
ಹೋಳಿ ಮಾತ್ರ ನಮ್ ಲೆವೆಲ್ ಗೆ ಫುಲ್ ಕಲರ್ ಫುಲ್ ಹಬ್ಬ.
ಸೈಕಲ್ ಮೊದಲನೇ ವೆಹಿಕಲ್ ನಮ್ದು.. ಅಂಡ್ ಸ್ಕೂಲ್ ನಲ್ಲೇ ಎಲ್ಲಾ ಹುಡುಗರಿಗೂ ಒಂದು ಕ್ರಶ್ ಇರುತ್ತೆ..ಆ ಕ್ರಶ್ ಹಿಂದೆ ಈ ಅಂಬಾರಿ ಹತ್ಕೊಂಡು ರೌಂಡ್ಸ್ ಹಾಕೋದು.
ಈಗೆ ಬಾಲ್ಯ ಕಳೆದು ಹೈಸ್ಕೂಲ್ ಬಂದು ಇದೆಲ್ಲ ಆಗೋವಾಗ ಕರೆಕ್ಟ್ ಟೈಮ್ ಗೆ ಮೊಬೈಲ್ ಸಿಕ್ತು.
ಮೊಬೈಲ್ ಮುಂಚೆನೇ ಬಂದಿತ್ತು.ಬ್ಲಾಕ್ ಅಂಡ್ ವೈಟ್ ನೋಕಿಯಾ, ಮೊಟೊರೊಲ, ಎಲ್ ಜಿ ಈಗೆ..
ಆಗಿನ್ನೂ ಡೆಸ್ಕ್ಟಾಪ್ ಕಂಪ್ಯೂಟರ್ಸ್ ಕಾಲ, ಎಲ್ಲರ ಹತ್ರಾನು ಇರ್ಲಿಲ್ಲ.ಇದವ್ರು ಫುಲ್ ಬಿಲ್ಡ್ ಅಪ್ ಹಾಗ.
ಫ್ರೆಂಡ್ಸ್ ಗೆ ಮೊಬೈಲ್ ನಲ್ಲಿ ಮಾತಾಡೋಕೆ ಮನೇಲಿ ಕೇಳಿ ತೊಗೊಂಡು 1 ನಿಮಿಷ ಅಂತೇಳಿ ಮಾತಾಡಿ ಕಟ್ ಮಾಡ್ತಿದ್ವಿ..ಮೆಸೇಜ್ ಮಾಡೋದು ಹಾಂಗೆ ಸ್ಟಾರ್ಟ್ ಆಯ್ತು. ನಮ್ಗೆ ಅವಾಗ್ಲೇ ಗೊತ್ತಾಗಬೇಕಿತ್ತು ಮುಂದೆ ನಮ್ ಲೈಫ್ ಇದ್ರಲ್ಲೇ ನಡೆದೋಗುತ್ತೆ ಅಂತ.

ಇಷ್ಟೆಲ್ಲಾ ಆಟ ಆಡಿ, ಬೈಸ್ಕೊಂಡು ಹೊಡೆಸ್ಕೊಂಡು ಛಿ ಅಂತ ಉಗುಸ್ಕೊಂಡು ಓದಿ ಹೆಂಗೋ ಎಸ್ ಎಸ್ ಎಲ್ ಸಿ ಗೆ ಬಂದ್ವಿ.ಇದಿಷ್ಟು ಒಂದ್ ನೆನಪಾದ್ರೆ ಈ ಕ್ಲಾಸ್ ದೇ ಒಂದು ನೆನಪು.
ಕೊನೆ ವರ್ಷ ಚೆನಾಗಿ ಓದಿ, ಮುಂದೆ ಏನು ಇರಲ್ಲ, ಎಲ್ಲಾ ನಿಮ್ದೆ, ಹಾಗ ಏನೂ ಕಷ್ಟ ಇರಲ್ಲ ಯಾರೂ ಏನೂ ಕೇಳಲ್ಲ ಹೇಳಲ್ಲ ಅಂತ ಕಥೆ ಹೇಳಿ, ನಮ್ಮನ್ನ ಯಾವುದೋ ಯುದ್ಧಕ್ಕೆ ಹೋಗೋ ತರಹ ತಯಾರಿ ಮಾಡಿದ್ರು. ಶಾಲೆಲಿ ಆ ಸೀನಿಯರಿಟಿ ಫೀಲಿಂಗ್, ಆ ಸೆಂಡ್ ಆಫ್ ಅಂತ ಫಂಕ್ಷನ್ ಸೂಪರ್ ನೆನಪು ಆಗಿ ಈಗಲೂ ಉಳಿದಿರುತ್ತೆ ಎಲ್ರೂ ಮನಸಲ್ಲೂ.

ನಮ್ 90'ಸ್ ಕಿಡ್ಸ್ ದು ಎಷ್ಟ್ ಹೇಳಿದ್ರು ಕಡಿಮೆನೇ, ನನಗಿನ್ನೂ ಕೆಲವೊಂದು ಆಟದ ಹೆಸ್ರು, ಪದಗಳು ಗೊತ್ತಾಗ್ತಾ ಇಲ್ಲ.
ಒಂದ್ ವೇಳೆ ಯಾರಾದ್ರೂ ಹೊಸದಾಗಿ ಇತಿಹಾಸ ಬರೆದ್ರೆ.. 90'ಸ್ ಕಿಡ್ಸ್ ಬರೋಕು ಮುಂಚೆ..ಅವ್ರು ಬಂದ್ಮೇಲೆ ಅಂತ ಎರಡು ವಾಲ್ಯೂಮ್ ಆಗುತ್ತೆ.
ಹಂಗೆ ನನಗಿನ್ನೂ ನಂಬಿಕೆ ಇದೆ.. ನಮ್ ಕಿಡ್ಸ್ ಇವಾಗ ಬೆಳೆದು ಕಾಲೇಜು ಶಿಕ್ಷಣ ಮುಗ್ಸಿ, ಡಿಗ್ರಿ ಮಾಸ್ಟರ್ ಡಿಗ್ರಿ ಎಲ್ಲಾ ತೊಗೊಂಡು ಕೆಲವೊಬ್ಬರು ದೊಡ್ಡ ಪೊಸಿಷನ್ ಲ್ಲಿ ಇದ್ರೆ ಇನ್ನ ಕೆಲವರು ನಾರ್ಮಲ್ ಜಾಬ್ ಮಾಡ್ತಿದಾರೆ..ಇನ್ನೂ ಕೆಲವರು ನನ್ ಥರ ಊರು ಕಾಡು ತಿರುಗಾಡ್ಕೊಂಡು ಇದಾರೆ. ಆದ್ರೆ ಹಿಸ್ಟರಿ ಏನಾದ್ರು ಮತ್ತೆ ಬದ್ಲಾದ್ರೆ ಅದು ನಮ್ ಕಿಡ್ಸ್ ಇಂದಾನೆ ಅನ್ನೋದು ಸತ್ಯ.

ನೆನಪುಗಳ ಮರೆಯಬೇಡ..ಆದರೆ ಎಂದೂ ಜ್ಞಾಪಿಸಿಕೊಳ್ಳಬೇಡ.
ಜ್ಞಾಪಿಸಿಕೊಂಡರೆ ಮತ್ತೆ ಅಂತದ್ದೇ ಮರೆಯಲಾರದಂತಹ ನೆನಪು ಬೇಕೆನ್ನಿಸುವುದನ್ನ ಅಲ್ಲಗಳೆಯಬೇಡ.

Comments

Popular posts from this blog

Educated Fools

ಔಷಧಿ ದಂಧೆ