Educated Fools

ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆ ಮತ್ತು ಸ್ಮರಣೆಯ ದಿನವಾದ ಜುಲೈ 26ರ ಮರುದಿನವೇ ಇದನ್ನ ಬರೆಯುತ್ತಿರುವುದಕ್ಕೆ ಕಾರಣವಿದೆ.
ಪ್ರತಿ ಬಾರಿಯೂ ದೇಶಕ್ಕಾಗಿ ಧರ್ಮಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟು ಸಮಾಜಕ್ಕಾಗಿ ಬದುಕಿದವರ ಸ್ಮರಣೆಯ ದಿನಗಳಂದು ಕಾಯುತ್ತಿರುತ್ತೇನೆ ಯಾರಾದರೂ ನೆನಪಿಸಿಕೊಳ್ಳುತ್ತಾರೆಯೇ ನೋಡೋಣವೆಂದು. ಆ ರೀತಿ ಜ್ಞಾಪಿಸಿಕೊಂಡವರಿಗೆಲ್ಲ ಅಥವಾ ನನಗೆ ಜ್ಞಾಪಿಸಿದವರಿಗೆಲ್ಲ ನಾನು ತುಂಬು ಹೃದಯದ ಧನ್ಯವಾದಗಳನ್ನ ಸಮರ್ಪಿಸಿರುತ್ತೇನೆ.
ಹಾಗೆಯೇ ನಿನ್ನೆಯ ದಿನವೂ ಕೂಡ..ಆದರೆ ನಿನ್ನೆಯ ದಿನ ಯಾವುದೋ ಒಬ್ಬ ವ್ಯಕ್ತಿ ಆಧಾರಿತ ಸ್ಮರಣೆಯ ದಿನವಾಗಿರಲಿಲ್ಲ. ವ್ಯಕ್ತಿಯನ್ನ ಸುಲಭವಾಗಿ ಮರೆತುಬಿಡಬಹುದು ಅಥವಾ ನೆನಪಿಸಿಕೊಳ್ಳದೇ ಇರಬಹುದು. ಅದು ನಮ್ಮ ಮತ್ತು ಆ ವ್ಯಕ್ತಿಯ ಸಿದ್ಧಾಂತ, ತತ್ವಗಳ ಆಧಾರದ ಮೇಲೆ ನಿಂತಿರುತ್ತದೆ.
ಆದರೆ ಜುಲೈ 26ರ ದಿನ ಸ್ವತಂತ್ರ ಭಾರತ ಎಂದೂ ಮರೆಯಲಾಗದ ದಿನವಾಗಿ ಉಳಿದಿದೆ. ಇಂದು ನಾನು ಪ್ರಶಾಂತವಾಗಿ ಇದನ್ನ ಬರೆದದ್ದಕ್ಕೂ ನೀವು ಓದುವುದಕ್ಕೂ, ದೇಶದ ಜನರೆಲ್ಲ ಜೀವಂತವಾಗಿ ನೆಮ್ಮದಿಯಿಂದ ಇರುವುದಕ್ಕೂ, ಈಗಲೂ ಶಾಂತಿಪ್ರಿಯ ದೇಶವಾಗಿ ಉಳಿದಿರುವುದಕ್ಕೂ ಕಾರಣವಾದ ದಿನ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕದನದ ಗೆಲುವಿನ ದಿನ. ಭಾರತದ ವೀರ ಸೈನಿಕರ ರಕ್ತದ ತ್ಯಾಗದಿಂದ ಬಂದ ವಿಜಯದ ದಿನ. ಇದು ವ್ಯಕ್ತಿಗೋ ಅಥವಾ ವ್ಯಕ್ತಿಯ ಸಿದ್ಧಾಂತಕ್ಕೋ ಸಂಭಂದಿಸಿದ ದಿನವಲ್ಲ. ಇಡಿಯ ದೇಶವೇ ಸಂಭ್ರಮಿಸಬೇಕಾಗಿದ್ದ ದಿನ 'ಕಾರ್ಗಿಲ್ ವಿಜಯೋತ್ಸವ'.
ಬೆಳ್ಳಗ್ಗೆ ಎದ್ಧಾಕ್ಷಣ ಪ್ರತಿ ದಿನದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದೆ. ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಇದರ ಬಗ್ಗೆ ಚಿತ್ರಗಳನ್ನ ಹಾಕಿದ್ದರು ಮತ್ತು ಆ ಮೂಲಕ ವೀರಮರಣವನ್ನಪ್ಪಿದ ಸೈನಿಕರಿಗೆ ವಂದಿಸಿದ್ದರು. ನೋಡಿ ಖುಷಿಯಾಯಿತು. ದಿನೇ ದಿನೇ ನನ್ನ ಬಳಗದಲ್ಲಿ ರಾಷ್ಟ್ರಪ್ರೇಮವನ್ನು ಹೊರಹಾಕುತ್ತಿರುವವರ ಜಾಸ್ತಿಯಾಗುತ್ತಿತ್ತು.
ಆದರೂ ಇವರ ನಡುವೆ ಕೆಲವು ವಿದ್ಯಾವಂತ ಮೂರ್ಖರು ಹಾಗೆ ಉಳಿದಿದ್ದರು.
ಜುಲೈ 26ರ ಬಗ್ಗೆ ಕೇಳಿದರೆ ಆ ದಿನವೇನು ಎಂದು ಕೇಳಿದವರಿದ್ದಾರೆ. ವಿವರಿಸಿದಾಗಲೂ ಕೂಡ ಆ ದಿನ celebrate ಮಾಡಿದರೆ ಏನೋ ಸಿಗುತ್ತೆ ಎಲ್ರೂ ಗೆಲ್ತಾರೆ ಎಲ್ರೂ ಸೋಲ್ತಾರೆ ಎನ್ನುವ ಉಡಾಫೆ ಮಾತುಗಳು ಕೇಳಿಬಂದವು. ಇವರಲ್ಲಿ ಇಂಜಿನಿಯರು, ಡಾಕ್ಟರುಗಳು, ವಿವಿಧ ಪದವಿ ಹೊಂದಿದವರು ಇದ್ದರು. ಪದವಿ ತೆಗೆದುಕೊಂಡ ಇವರುಗಳು ತಮ್ಮ ಸುತ್ತಲಿನ ಬಗ್ಗೆ ತಿಳಿದುಕೊಳ್ಳಲಾಗದೆ, ತಮ್ಮ ದೇಶದ ಬಗ್ಗೆ ಕನಿಷ್ಠ ಜ್ಞಾನವಿಲ್ಲದೇ ಯಾವುದೋ ಪರದೇಶದ ಕಂಪೆನಿಗಾಗಿ ಮತ್ತು ಇನ್ಯಾರದೋ ಅಸ್ಪತ್ರೆಗಾಗಿ ದುಡಿಯುತ್ತಿದ್ದಾರೆ. ಇವರುಗಳು ಹಾಕುವ ಅಪ್ಲಿಕೇಶನ್ ಗಳಲ್ಲಿರುವ Nationality ಕಲಮಿನಲ್ಲಿ Indian ಅಂತ ಬರೆಯುವ ಶೋಕಿ ಬೇರೆ.
ಯಾವುದು ವಿದ್ಯೆ..ನಮಗೆ ನಮ್ಮತನದ ಬಗ್ಗೆ ತಿಳಿಸಿಕೊಡದ ವಿದ್ಯೆಯಲ್ಲಿ ಪದವಿ ಅಲ್ಲ ಅತ್ಯುನ್ನತ ಸ್ಥಾನ ಪಡೆದುಕೊಂಡರು ಅದು ವ್ಯರ್ಥವೇ. ನಮ್ಮ ಸುತ್ತಲಿನ ಜನರಿಗಾಗಿ ಬದುಕುವ ಮನಸ್ಸಿಲ್ಲದೆ ಇನ್ನ್ಯಾವುದೋ ಪರದೇಶದ ಪದ್ಧತಿಯನ್ನ ಅಳವಡಿಸಿಕೊಂಡು ಶೋಕಿಗಾಗಿ ನಾನೊಬ್ಬ ಭಾರತೀಯ ಎಂದುಕೊಳ್ಳಲು ನಾಚಿಕೆ ಇರಬೇಕು ಮೊದಲು. ಇತಿಹಾಸ ಉಳಿಯುವುದು ನಿನ್ನ ಪದವಿಯಿಂದಲ್ಲ ನೀನು ಈ ಸಮಾಜಕ್ಕಾಗಿ ಮಾಡುವ ಕಾರ್ಯದಿಂದ. ನಮಗಾಗಿ ಬದುಕಿರುವವರನ್ನಾದರು ಒಂದು ದಿನ ನೆನಪಿಸಿಕೊಂಡು ಅವರ ಬಗ್ಗೆ ನಿನ್ನವರಿಗೂ ತಿಳಿಸಿದರೆ ಸಾಕು ಈ ದೇಶದ ಇತಿಹಾಸವನ್ನು ನೀನು ಸ್ವಲ್ಪ ಮಟ್ಟಿಗಾದರೂ ಉಳಿಸಿದಂತೆ, ಸಮಾಜಕ್ಕಾಗಿ ಬದುಕಿದಂತೆ. ಏಕೆಂದರೆ  ಮೊದಲೇ ಹೇಳಿದಂತೆ ಇದ್ಯಾವುದೋ ವ್ಯಕ್ತಿ ಆಧಾರಿತ ದಿನವಲ್ಲ. ನಾವು ಉಸಿರಾಡುವುದಕ್ಕಾಗಿ ತಮ್ಮ ಉಸಿರನ್ನು ಪಣವಾಗಿಟ್ಟು ಹೋರಾಡಿದ ನಮ್ಮ ಸೈನಿಕರ ಬಲಿದಾನದ ಸ್ಮರಣೆಯ ದಿನ. ಹಾಗೆಯೇ ಇದರ ಬಗ್ಗೆಯೂ ಕೆಲವು ದೇಶದ್ರೋಹಿ ರಾಜಕಾರಣಿಗಳು ಮಾತಾಡುತ್ತಾರೆ. ಅವ್ರಿಗೆ ತಿಳಿದಿದೆಯೋ ಇಲ್ಲವೋ ರಾಜರ ಕಾಲದಿಂದಲೂ ಪ್ರತಿ ಯುದ್ಧದ ಗೆಲುವಿನಲ್ಲೂ ಸೈನಿಕರಿಗೆ ವಿಶೇಷ ಗೌರವವನ್ನು ನೀಡುತ್ತಿದ್ದರು ಮತ್ತು ವಿಜಯೋತ್ಸವಗಳನ್ನು ಆಚರಿಸುತ್ತಿದ್ದರು. ಅದು ನಮ್ಮ ಸೈನಿಕರಿಗೆ ನಾವು ಕೊಡುವ ಗೌರವ. ಇರಲಿ, ಆಂಗ್ಲರ ಶೈಕ್ಷಣಿಕ ಪದ್ಧತಿಯನ್ನ ಅಳವಡಿಸಿಕೊಂಡ ನಾವು ನಮ್ಮನ್ನೇ ದೂಷಿಸಿಕೊಳ್ಳಬೇಕು ಯಾರನ್ನು ದೂಷಿಸುವಂತಿಲ್ಲ. ಆದರೆ ಆ ಒಂದು ಪದವಿ ತೆಗೆದುಕೊಳ್ಳುವುದನ್ನೇ ಮತ್ತು ತೆಗೆದುಕೊಂಡಿರುವುದನ್ನೇ ಮತ್ತು  ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಪಡೆಯುವುದನ್ನೇ ಸಾಧನೆಯೆಂದು ಬೀಗುತ್ತಿರುವವರೆಲ್ಲ ಒಮ್ಮೆ ಯೋಚಿಸಿ ಅದೇ ಸೈನಿಕ ನಿಮ್ಮ ಮನೆಯ ನಿಮ್ಮ ತಂದೆಯೋ ನಿಮ್ಮ ಅಣ್ಣನೋ ಆಗಿದಿದ್ದರೆ ಹೇಗಿರುತ್ತಿತ್ತು ಎಂದು.
ಇನ್ನಾದರೂ ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದರೆಡೆಗೆ ಒಂದು ಹೆಜ್ಜೆ ಮುಂದೆ ಬನ್ನಿ ದೇಶ ತಾನಾಗೇ ಉಳಿಯುತ್ತೆ ಮತ್ತು ನಾವು ಉಳಿಯುತ್ತೇವೆ.
ಅಂದಹಾಗೆ ನಾನು ಆ ದಿನವನ್ನ #ಯುವಾಬ್ರಿಗೇಡ್ ಆಯೋಜಿಸಿದ್ದ 'ಕಾರ್ಗಿಲ್ ವಿಜಯೋತ್ಸವ' ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಅರ್ಥಪೂರ್ಣವಾಗಿ ಕಳೆದೆ, ಇತಿಹಾಸ ನೆನಪಿಸಿಕೊಂಡೆ, ವೀರ ಮರಣವನ್ನಪ್ಪಿದ ಸೈನಿಕರಿಗೆ ಮನದಲ್ಲೇ ವಂದಿಸಿದೆ.
ಜೈ ಹಿಂದ್.

Comments

  1. Very nice blog. I really like this post very much. I also very impressed by this post very much. I also see your writing skills. Your writing skills are very amazing. I also like your skills very much.
    lansweeper free download
    origin pro crack
    voicemod torrent
    quicktime pro torrent
    clean master pro free
    Crack Like

    ReplyDelete
  2. Corel Paintshop Pro 2022 Crack remainders habitually a factory near that you ampoule institution near accomplish handler accounts critical-power complete proficient élan
    https://freeforfile.com/corel-paintshop-pro-2022-crack-activation-code/

    ReplyDelete
  3. . For being the first person to come in and the last person to leave, we commend your dedication and hard work!

    templatetoaster crack
    clip studio-paint ex crack
    sidify music converter crack

    ReplyDelete
  4. Its a Very Great and Amazing Blog Dear This is Very Great and Helpful..
    Talha PC
    Crackedithere
    dr fone crack
    driverfinder pro crack

    ReplyDelete
  5. https://crackchase.com/winaso-registry-optimizer-crack/
    https://crackchase.com/aomei-partition-assistant-crack/

    ReplyDelete
  6. NetLimiter Pro Crack is merely a method for masking the rate. It handles bandwidth and both the speed if the rate isn’t responding at the same time.
    NetLimiter Pro Crack Free Download For PC

    ReplyDelete
  7. Hotspot Shield Crack provides you with a number of shields, allowing you to safeguard all of your information with only one click.
    Hotspot Shield Crack For Windows Full Torrent

    ReplyDelete
  8. Excellent article, but I was wondering if you could write anything more on this subject? If you could clarify this, I would much appreciate it.
    Why Is Exela Technologies Stock Dropping

    ReplyDelete

Post a Comment

Popular posts from this blog

ಆ ನೆನಪುಗಳು

ಔಷಧಿ ದಂಧೆ