ನಿತ್ಯಾನಂದ ವಿವೇಕವಂಶಿ

ಇಂದು ನಿತ್ಯಾನಂದ ವಿವೇಕವಂಶಿ..ಅಂದರೆ ನಾನು ಪ್ರೀತಿಯಿಂದ ಕರೆಯುವ ನಿತ್ಯಣ್ಣನ ಜನ್ಮ ದಿನ.
ಆ ಹೆಸರಿನಲ್ಲಿ ಏನೋ ವಿಶೇಷವಿದೆ ಅಲ್ಲವೇ..
ಹೌದು ಹೆಸರಿನಷ್ಟೇ ವ್ಯಕ್ತಿಯೂ ಕೂಡ ವಿಶೇಷವಾಗಿದ್ದಾರೆ.
ಇದು ಕೇವಲ ಅವರ ಕಿರು ಪರಿಚಯವಷ್ಟೇ. ಧರ್ಮಕ್ಕಾಗಿ ಅವರು ಮಾಡುತ್ತಿರುವ ಕಾರ್ಯವನ್ನ ನಿಮಗೆಲ್ಲ ತಿಳಿಸುವ ಒಂದು ಪುಟ್ಟ ಪ್ರಯತ್ನವಾಗಿದೆ.
ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ನಿತ್ಯಣ್ಣ ಹುಟ್ಟಿ ಬೆಳೆದದ್ದು ಮಂಡ್ಯದಲ್ಲಿ..ಜೂನ್ 27 1988ರಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಂಡ್ಯ ಜಿಲ್ಲೆ, ಪದವಿ ಪೂರ್ವ ಶಿಕ್ಷಣವನ್ನು ಮೈಸೂರಿನಲ್ಲಿಯೂ ಹಾಗೂ ಪದವಿಯನ್ನು ಮಂಡ್ಯದಲ್ಲಿಯೂ ಪೂರೈಸಿದರು.
ನಂತರ ಬಿ.ಎಡ್ ನ್ನು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವ್ಯಾಸಂಗ ಮಾಡಿದರು.
ಪಿಯುಸಿ ಇದ್ದಾಗಲೇ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ಪರಿಚಯ, ಸ್ವದೇಶಿ ಆಂದೋಲನದ ಮೂಲಕ ಇಡಿಯ ದೇಶವೇ ಎದ್ದು ನಿಲ್ಲುವಂತೆ ಮಾಡಿದ್ದ ಸ್ವದೇಶಿ ಹರಿಕಾರ ರಾಜೀವ್ ಧೀಕ್ಷಿತರ ಪ್ರೇರಣೆ ನಿತ್ಯಣ್ಣರನ್ನ ಸಮಾಜಮುಖಿಯಾಗಿಸಿತು. ಅಲ್ಲಿಂದ ದೇಶಕ್ಕಾಗಿಯೇ ತನ್ನ ಬದುಕು ಎಂಬಂತೆ ಬದುಕಲಾರಂಭಿಸಿದರು. ಈ ದಿನಗಳಲ್ಲಿ ಸರ್ಕಾರಿ ಕೆಲಸಕ್ಕಾಗಿ ಲಾಬಿ ನಡೆಸಿ ಕೆಲಸ ಗಿಟ್ಟಿಸಿಕೊಳ್ಳುವವರಿದ್ದಾರೆ ಆದರೆ ಇವರು ಸರ್ಕಾರಿ ನೌಕರಿ ಸಿಕ್ಕಿದರೂ ರಾಜೀನಾಮೆ ಸಲ್ಲಿಸಿ ವಾಪಸ್ ಬಂದು ಮತ್ತೆ ಸಮಾಜದೆಡೆಗೆ ನಿಂತರು.
ನಮೋ ಬ್ರಿಗೇಡ್ನಲ್ಲಿ ಗುರುತಿಸಿಕೊಂಡಿದ್ದ ಇವರು ನಂತರ ಯುವಾಬ್ರಿಗೇಡ್ನ ರಾಜ್ಯ ಸಂಚಾಲಕರಾಗಿ 3 ವರ್ಷ ಜವಾಬ್ದಾರಿ ನಿರ್ವಹಿಸಿದರು. ರಾಜ್ಯವೆಲ್ಲ ಸುತ್ತಾಡಿ ಸಂಘಟನೆ ಮಾಡುತ್ತ ತಮ್ಮ ವಿಶಿಷ್ಟ ಮಾತುಗಳಲ್ಲಿ ಎಂಥವರನ್ನೂ ಸೆಳೆಯಬಲ್ಲವರಾಗಿದ್ದರು. ಯುವಾಬ್ರಿಗೇಡ್ ಹೊರತು ಪಡಿಸಿಯೂ ಕೂಡ ಸಾವಿರಾರು ಜನರ ಯುವಕರ ಕಣ್ಮಣಿಯಾಗಿ ಹೊರ ಹೊಮ್ಮಿದರು.
ಸ್ವಾಮಿ ವಿವೇಕಾನಂದರನ್ನ ಪ್ರತಿಯೊಬ್ಬರಿಗೂ ಪರಿಚಯಿಸಬೇಕು ಮತ್ತು ಅದು ಬೆಳೆಯುವ ಹಂತದಲ್ಲೇ ನಿರ್ಮಾಣವಾಗಬೇಕು ಎನ್ನುವ ಮಹತ್ವಾಕಾಂಕ್ಷಿ ಯೋಜನೆ ಇಟ್ಟುಕೊಂಡು ತಂದಿದ್ದೇ 'ನಿರ್ಮಾಣಂ' ಪರೀಕ್ಷೆ. ಶಾಲಾ ಮಕ್ಕಳಿಗೆಂದೇ ಈ ಪರೀಕ್ಷೆಯನ್ನು ಆಯೋಜಿಸಿದ್ದರು. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈ ಪರೀಕ್ಷೆ ನಡೆಯಿತು. ಎಲ್ಲದನ್ನೂ ಸುವ್ಯವಸ್ಥಿತವಾಗಿ ನಡೆಸುವುದೇ ಇವರ ವಿಶೇಷತೆ. ತಮ್ಮ ಪರಿಚಿತರಿಗೆ, ಆಪ್ತರಿಗೆ, ಕಾರ್ಯಕರ್ತರಿಗೆ ಎಲ್ಲರಿಗೂ ಪ್ರತಿ ದಿನವೂ ಅಧ್ಯಾತ್ಮದ ಮತ್ತು ಧರ್ಮದ ಕುರಿತಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು, ಅಪಾರವಾದ ಜ್ಞಾನವಿದ್ದರೂ ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಾರೆ. ಅವರ ಈ ಗುಣವೇ ಅವರನ್ನ ಇನ್ನಷ್ಟು ಪ್ರೀತಿಸಲು ಕಾರಣವಾಗಿದೆ. ಧರ್ಮ ಕಾರ್ಯದಲ್ಲಿ ಅವರು ಈಗ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆ ಇಟ್ಟಕೊಂಡು ಬಂದಿದ್ದಾರೆ. 'ಸನಾತನಂ' ಎನ್ನುವ ಹೊಸ ಪರೀಕ್ಷೆ. ಇದು ಕೇವಲ ಶಾಲಾ ಮಕ್ಕಳಿಗೆ ಅಷ್ಟೇ ಅಲ್ಲದೇ ಯಾರು ಬೇಕಾದರೂ ಬರೆಯಬಹುದು. ಹಿಂದುತ್ವದ ಕುರಿತಾಗಿ ಈ ಪರೀಕ್ಷೆ ಇದ್ದು ನಮ್ಮ ಧರ್ಮದ ಬಗ್ಗೆ ನಮಗೆ ಏನು ಗೊತ್ತು ಏನು ಗೊತ್ತಿಲ್ಲ ಮತ್ತು ನಮ್ಮಲ್ಲಿರುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಗುವ ಪರೀಕ್ಷೆ ಇದು.
ಇಂತಹ ಶ್ರೇಷ್ಠ ವ್ಯಕ್ತಿತ್ವಕ್ಕೆ ನಮ್ಮೆಲ್ಲರ ಪ್ರೀತಿ ಸಹಕಾರವಿದ್ದರೆ ಅದು ಇನ್ನಷ್ಟು ಪ್ರಕರವಾಗುವುದು. ಯುವಪೀಳಿಗೆಗೆ ಇನ್ನಷ್ಟು ಪ್ರೇರಣೆಯಾಗುವುದು.
ಅವರನ್ನ ನೆನೆಯುವ ಮೂಲಕ ನಿಮ್ಮೆಲ್ಲರ ಪರವಾಗಿ ಅವರ ಜನ್ಮ ದಿನದಂದು ಶುಭಾಷಯಗಳನ್ನು ಕೋರುತ್ತೇನೆ. ನಿಮ್ಮ ಮಾರ್ಗದರ್ಶನ ಮಾತು ಪ್ರೀತಿ ಸದಾ ಈಗೆ ಇರಲಿ ಎಂದು ಕೇಳಿಕೊಳ್ಳುತ್ತಾ.....

facebook.com/nithyanandavivekavamshi
twitter.com/vivekavamshi
youtube.com/vivekavamshi

Comments

Popular posts from this blog

ಆ ನೆನಪುಗಳು

Educated Fools

ಔಷಧಿ ದಂಧೆ