'ಮತ್ತೊಮ್ಮೆ ದಿಗ್ವಿಜಯ'
'Sisters and Brothers of America'
ಈ ಮಾತುಗಳು ಕೇಳಿದರೆ ಅಥವಾ ಇದನ್ನ ಓದಿದರೆ ಸಾಕು ಮೊದಲು ನೆನಪಾಗುವುದೇ ನಮ್ಮ ಭಾರತ ವರ್ಷದ ಹೆಮ್ಮೆಯ ಸಂತ ಶ್ರೇಷ್ಠ ಸ್ವಾಮಿ ವಿವೇಕಾನಂದರು. ಭಾರತ ಯಾವತ್ತಿದ್ದರು ಈ ಜಗತ್ತಿಗೆ ಗುರುವಿನ ಸ್ಥಾನದಲ್ಲಿ ನಿಲ್ಲುವುದು ಎಂದು ತೋರಿಸಿಕೊಟ್ಟಂತಹ ಮಹಾತ್ಮ. ಇಡಿಯ ಭಾರತವೇ ತನ್ನತನವನ್ನು ಮರೆತು ದಾಸ್ಯದಡಿಯಲ್ಲಿ ಬದುಕುತ್ತಿದ್ದಾಗ ದೂರದ ಅಮೇರಿಕಾದಲ್ಲಿ ಸ್ವಾಮೀಜಿಯವರು ಈ ಮಾತುಗಳಿಂದ ತಮ್ಮ ಭಾಷಣ ಪ್ರಾರಂಭಿಸಿದಾಗ ತಮ್ಮನ್ನು ತಾವೇ ಅತೀ ಶ್ರೇಷ್ಠರು ಮತ್ತು ಬುದ್ಧಿವಂತರು ಎಂದುಕೊಂಡಿದ್ದ ಜನರೆಲ್ಲ ಎದ್ದು ನಿಂತು ಕರತಾಡನ ಮಾಡಿದ್ದರು.
ಗುರುವರ್ಯ ರಾಮಕೃಷ್ಣ ಪರಮಹಂಸರ ಮತ್ತು ಮಾತೆ ಶಾರದದೇವಿಯವರ ಆಶೀರ್ವಾದದಿಂದ ಭಾರತವನ್ನೆಲ್ಲ ಸುತ್ತಿ, ಇಲ್ಲಿನ ಜನರ ಸಮಸ್ಯೆಗಳಿಗೆ ಕಣ್ಣೀರಿಟ್ಟು ಕನ್ಯಾಕುಮಾರಿಯಲ್ಲಿ ಮೂರು ದಿನಗಳ ಕಾಲ ಧ್ಯಾನಸ್ಥ ಸ್ಥಿತಿಯಲ್ಲಿ ಇದ್ದು ನಂತರ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆಯಲಿದ್ದ ' ವಿಶ್ವ ಸರ್ವ ಧರ್ಮ ಸಮ್ಮೇಳನ ' ದಲ್ಲಿ ಭಾಗವಹಿಸಲು ಹೊರಟ ಸ್ವಾಮೀಜಿ ಅಲ್ಲಿಗೆ ಹೋದಾಗ ಪಟ್ಟ ಕಷ್ಟಗಳನ್ನೆಲ್ಲ ಸಹಿಸಿಕೊಂಡು, ಅಮೇರಿಕದ ನೆಲದಲ್ಲಿ ಬಂದ ಕಾರ್ಯವನ್ನ ಮಾಡಲೇಬೇಕೆಂದು ಧೃಢವಾಗಿ ನಿಶ್ಚಯಿಸಿ ವೇದಿಕೆಯಲ್ಲಿ ಕೂತಿದ್ದರು ಸ್ವಾಮೀಜಿ.
ಧರ್ಮ ವಿಸ್ತರಣೆಗಾಗಿ ಹಲವಾರು ದೇಶಗಳಿಗೆ ಮಿಶನರಿಗಳನ್ನ ಕಳುಹಿಸಿ, ಸೇನೆಯನ್ನ ಕಳುಹಿಸಿ ಜನರನ್ನ ಬಲವಂತವಾಗಿ, ಕ್ರೂರವಾಗಿ ಮತಾಂತರ ಮಾಡಿ ತಮ್ಮದು ಶಾಂತಿಯುತ ಧರ್ಮ ಎಂದು ಹೇಳಿಕೊಳ್ಳುತ್ತಿದ್ದ ಅನೇಕ ರಾಷ್ಟ್ರಗಳ ಮತ್ತು ಧರ್ಮಗಳ ಪ್ರತಿನಿಧಿಗಳ ಎದುರು ನಿಂತು ಮಾತನಾಡುವಾಗ ನೆರೆದಿದ್ದವರಿಗೆ ಸ್ವಾಮೀಜಿ ಕೇವಲ ಒಬ್ಬ ವ್ಯಕ್ತಿಯಾಗಿ ಕಾಣಿಸಿರಲಿಲ್ಲ, ಬದಲಾಗಿ ' ಭಾರತ ' ವೇ ನಿಂತು ಮಾತಾಡುವಂತೆ ಭಾಸವಾಗುತ್ತಿತ್ತು. ಅವರಲ್ಲಿದ್ದ ಆಲೋಚನೆಗಳಿಗೆ ಕೇವಲ ಅಮೇರಿಕದ ಜನರೇನು ಇಡಿಯ ವಿಶ್ವವೇ ಸ್ವಾಮೀಜಿಯವರ ಕಾಲಡಿಯಲ್ಲಿ ಇರಬೇಕಿತ್ತು.
ಈ ಐತಿಹಾಸಿಕ ಭಾಷಣಕ್ಕೆ ಈಗ 125 ವರ್ಷ ತುಂಬಿದೆ. ಅದರ ಸಂಭ್ರಮಾಚರಣೆ ಕೂಡ ವೈಭವದಿಂದ ನಡೆಯುತ್ತಿದೆ. ಹೌದು, 'YuvaBrigade' ಈ ಒಂದು ಕಾರ್ಯಕ್ರಮವನ್ನ ಕೈಗೆತ್ತಿಕೊಂಡಿದೆ. ಇದರ ಜೊತೆಗೆಯೇ ಸ್ವಾಮೀಜಿಯವರ ವಿದೇಶ ಉಪನ್ಯಾಸಗಳಲ್ಲಿ ಪ್ರಭಾವಿತಗೊಂಡ ಓರ್ವ 'Christian' ಮಹಿಳೆ ಮುಂದೆ ಇವರ ಶಿಷ್ಯೆಯಾಗಿ ಭಾರತಕ್ಕೆ ಬಂದು ' ನಿವೇದಿತೆ ' ಯಾಗಿ ಸ್ವಾಮೀಜಿಯವರ ದಾರಿಯಲ್ಲೆ ಬದುಕನ್ನ ನಡೆಸಿದರು. ಅವರನ್ನೂ ಕೂಡ ಪರಿಚಯಿಸುವ ಒಂದು ಪ್ರಯತ್ನ ಈಗಾಗಲೇ ಇದೇ ಸಂಘಟನೆ ' ಸ್ವಾಮಿ ವಿವೇಕಾನಂದ ಮತ್ತು ಅಕ್ಕ ನಿವೇದಿತಾ ' ಸಾಹಿತ್ಯ ಸಮ್ಮೇಳನಗಳನ್ನ ಆಯೋಜಿಸುವ ಮೂಲಕ ಮಾಡಿದೆ. ಈ ಬಾರಿ ಈ ಕಾರ್ಯಕ್ರಮವನ್ನ ರಥಯಾತ್ರೆಯ ಮೂಲಕ ಪ್ರತಿ ತಾಲ್ಲೂಕಿನಲ್ಲಿಯೂ ಬರ ಮಾಡಿಕೊಳ್ಳಲಾಗುತ್ತಿದೆ. ಸಾರಥಿಯಾಗಿ ' ಸೋದರಿ ನಿವೇದಿತಾ ' ರಥದಲ್ಲಿದ್ದಾರೆ.
ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ತತ್ತ್ವಗಳು ಅವರ ಅಶಯಗಳನ್ನ ಈಡೇರಿಸುವ ಪ್ರಧಾನಿಯೊಬ್ಬರು ಸಿಕ್ಕಿದ್ದಾರೆ, ಹಾಗೆಯೇ ಇದನ್ನ ಪರಿಚಯಿಸಲು ಮತ್ತು ಇಂದಿನ ಯುವಕರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಿ ಸಮಾಜದೆಡೆಗೆ ಬರಸೆಳೆಯಲು ' ಚಕ್ರವರ್ತಿ ಸೂಲಿಬೆಲೆ ' ಅಣ್ಣನವರು ಇದ್ದಾರೆ. 'YuvaBrigade' ನಲ್ಲಿ ಈಗಾಗಲೇ ಅಂತಹ ಯುವಕರು ಸಿದ್ಧರಾಗಿದ್ದಾರೆ.
ನೀವು ಕೈಜೋಡಿಸಿ.
ಜೈ ಗುರುದೇವ
ಜೈ ಭಾರತಮಾತ
Comments
Post a Comment